ಬುರೈಲ್ ಕೋಟೆಯು ಭಾರತದ ಚಂಡೀಗಢದಲ್ಲಿರುವ ಒಂದು ಕೋಟೆಯಾಗಿದೆ. ಇದನ್ನು ಮೊಘಲರ ಕಾಲದಲ್ಲಿ ನಿರ್ಮಿಸಲಾಯಿತು. ಇದು ೧೭೧೨ ವರೆಗೆ ಮೊಘಲರ ನಿಯಂತ್ರಣದಲ್ಲಿತ್ತು. ಈ ಕೋಟೆಯ ಸೈನಿಕ ತುಂಬಾ ಕ್ರೂರಿಯಾಗಿದ್ದನು. ಹೊಸದಾಗಿ ಮದುವೆಯಾದ ಪ್ರತಿಯೊಬ್ಬ ಹೆಣ್ಣನ್ನು ತನ್ನ ಗಂಡನ ಬಳಿಗೆ ಕಳುಹಿಸುವ ಮೊದಲು ಕೆಲವು ದಿನಗಳ ಕಾಲ ತನ್ನೊಂದಿಗೆ ಇರಿಸಿಕೊಳ್ಳುತ್ತಿದ್ದನು. ಜನರು ಅವನ ವಿರುದ್ಧ ಬಂದಾ ಸಿಂಗ್‌ಗೆ ದೂರು ನೀಡಿದರು. ಬಂದಾ ಸಿಂಗ್‌ ಸೈನ್ಯವನ್ನು ಕಳುಹಿಸಿದನು. ನಂತರ ಅವನು ಸೈನಿಕನನ್ನು ಕೊಂದು ಕೋಟೆಯನ್ನು ವಶಪಡಿಸಿಕೊಂಡನು. == ಚಿತ್ರಗಳು == == ಉಲ್ಲೇಖಗಳು ==